Nikhil Kumar wishes for his mother birthday | Nikhil | Anitha Kumarswamy | Filmibeat Kannada

2020-02-24 4

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಪತ್ನಿ, ರಾಮನಗರ ಶಾಸಕಿ ಅನಿತಾ ಕುಮಾರಸ್ವಾಮಿ ಇಂದು (ಫೆಬ್ರವರಿ 24) ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿ ಇದ್ದಾರೆ. ಹುಟ್ಟುಹಬ್ಬದ ದಿನ ತಾಯಿಗೆ ಪ್ರೀತಿಯ ಮಗನ ಕಡೆಯಿಂದ ಶುಭಾಶಯ ತಲುಪಿದೆ. ನಟ ನಿಖಿಲ್ ಕುಮಾರ್ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ತಾಯಿಗೆ ವಿಶ್ ಮಾಡಿದ್ದಾರೆ. ''ಹುಟ್ಟುಹಬ್ಬದ ಶುಭಾಶಯಗಳು ಅಮ್ಮ. ನೀನು ನನಗೆ ಜನ್ಮ ನೀಡಿದ ದಿನದಿಂದ ನೀನು ಮಾಡಿದ ತ್ಯಾಗ ಅಪಾರ. ನಾನು ಜೀವನ ಪೂರ್ತಿ ನಿನಗೆ ಋಣಿಯಾಗಿ ಇರುತ್ತೇನೆ. ನೀನು ಖುಷಿಯಾಗಿ ಇರುವುದನ್ನು ನೋಡಿದರೆ ನನ್ನ ಮುಖದಲ್ಲಿ ನಗು ಮೂಡುತ್ತದೆ.'' ಎಂದು ತಾಯಿಯ ಬಗ್ಗೆ ಬರೆದುಕೊಂಡಿದ್ದಾರೆ.

Nikhil Kumar special wishes for his mother Anitha Kumaraswamy birthday.